ಮೊದಲ ಬರಹ

1–2 minutes

90 words

ಈ ತಿಂಗಳ ರಾಜ್ಯೋತ್ಸವ ಒಂದನೇಯ ತಾರೀಖಿಗೆ ಮಾಡಾಲಾಗ್ಲಿಲ್ಲ. Amsterdam ಟ್ರಿಪ್ನಲ್ಲಿ ಇದ್ದೆ. ಆದರೆ ಈ ನಡುವೆ ಹಾಗೆ ಏನೋ ಶೂನ್ಯ ಮನೋಭಾವ. Void ಅಂತಾರಲ್ಲ, ಹಾಗೆ. ಮುಂಚೆ ಬೆಂಗಳೂರಿನಲ್ಲಿ ಇದ್ದಾಗ ಎಲ್ಲರೊಂದಿಗೆ ಕನ್ನಡದಲ್ಲಿ ಮಾತಾಡ್ತಿದ್ದೆ. ಎಲ್ಲೆಲ್ಲೂ ಕನ್ನಡ ಓದ್ತಿದ್ದೆ. ನಾಟಕ, ಸಿನಿಮಾ, ಹಾಡುಗಳು, ಸಂಭಾಷಣೆಗಳು; ಹೀಗೆ ಹಲವಾರು ಕಡೆ ಇಂದ ನನ್ನ ಬಾಳು ಕನ್ನಡಮಯವಾಗಿತ್ತು. ಆದರೆ ಇಲ್ಲಿಗೆ ಬಂದಾಗಿನಿಂದ, ಹೊಸ ಭಾಷೆ, ಸಂಸ್ಕೃತಿ ಕಲಿಯೋ ಅಷ್ಟ್ರಲ್ಲಿ, ನನ್ನ ಭಾಷೆ, ನಾಡು ಮತ್ತು ಸಂಸ್ಕೃತಿಯ ಬೆಲೆ ಇನ್ನ ದುಪ್ಪಟ್ಟಾಯ್ತು.…

ಈ ತಿಂಗಳ ರಾಜ್ಯೋತ್ಸವ ಒಂದನೇಯ ತಾರೀಖಿಗೆ ಮಾಡಾಲಾಗ್ಲಿಲ್ಲ. Amsterdam ಟ್ರಿಪ್ನಲ್ಲಿ ಇದ್ದೆ. ಆದರೆ ಈ ನಡುವೆ ಹಾಗೆ ಏನೋ ಶೂನ್ಯ ಮನೋಭಾವ. Void ಅಂತಾರಲ್ಲ, ಹಾಗೆ. ಮುಂಚೆ ಬೆಂಗಳೂರಿನಲ್ಲಿ ಇದ್ದಾಗ ಎಲ್ಲರೊಂದಿಗೆ ಕನ್ನಡದಲ್ಲಿ ಮಾತಾಡ್ತಿದ್ದೆ. ಎಲ್ಲೆಲ್ಲೂ ಕನ್ನಡ ಓದ್ತಿದ್ದೆ. ನಾಟಕ, ಸಿನಿಮಾ, ಹಾಡುಗಳು, ಸಂಭಾಷಣೆಗಳು; ಹೀಗೆ ಹಲವಾರು ಕಡೆ ಇಂದ ನನ್ನ ಬಾಳು ಕನ್ನಡಮಯವಾಗಿತ್ತು. ಆದರೆ ಇಲ್ಲಿಗೆ ಬಂದಾಗಿನಿಂದ, ಹೊಸ ಭಾಷೆ, ಸಂಸ್ಕೃತಿ ಕಲಿಯೋ ಅಷ್ಟ್ರಲ್ಲಿ, ನನ್ನ ಭಾಷೆ, ನಾಡು ಮತ್ತು ಸಂಸ್ಕೃತಿಯ ಬೆಲೆ ಇನ್ನ ದುಪ್ಪಟ್ಟಾಯ್ತು. ನನ್ನದೊಂದು ಭಾಗ ಕಳೆದುಕೊಳ್ಳೋ ಭಯ ಶುರುವಾಯ್ತು. ಆಗ ನಿರ್ಧಾರ ಮಾಡ್ದೆ, ಎಲ್ಲೇ ಇದ್ರೂ, ಹೇಗೆ ಇದ್ರೂ, ನನ್ನ ಬೇರುಗಳನ್ನ ನಾನೇ ಗಟ್ಟಿ ಮಾಡ್ಕೋತೀನಿ ಅಂತ. ಅದಕ್ಕಾಗಿ ಈ ಬ್ಲಾಗ್. 

ಅಭ್ಯಾಸದಿಂದ ಅಧ್ಯಾಯನ ಅಂತ ಬರಿಯೋಕೆ ಶುರು ಮಾಡ್ತಿದೀನಿ. ತಪ್ಪಿದ್ದಲ್ಲಿ, ಕ್ಷಮಿಸಿ, ತಿದ್ದಿ ಹೇಳಿ.

ನಿಮ್ಮ ಮನಸ್ಸನ್ನು ಮುಟ್ಟವ ಆಶಯದೊಂದಿಗೆ,

Manjushree Avatar

Leave a Reply

Your email address will not be published. Required fields are marked *